(ಪುಂಗವ: 1/12/2013)
ಬಿಹಾರದ ಪಾಟ್ನಾದಲ್ಲಿ ನಡೆದ ಬಿಜೆಪಿಯ ಹೂಂಕಾರ ಸಮಾವೇಶದ ಸಂದರ್ಭದಲ್ಲಿ ನಡೆದ ಬಾಂಬ್ ಸ್ಫೋಟಗಳಿಗೆ ಸಂಭಂದಿತ ತನಿಖೆಯ ಹಿನ್ನೆಲೆಯಲ್ಲಿ ಹೊರಬಂದ ಮಾಹಿತಿಗಳು ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿವೆ. ಇಂಡಿಯನ್ ಮುಜಾಹಿದ್ದೀನ ಮುಂತಾದ ಜಿಹಾದಿ ಭಯೋತ್ಪಾದಕ ಗುಂಪುಗಳು ತಮ್ಮ ಕಾರ್ಯಸಾಧನೆಗೆ ಹಿಂದೂ ಯುವಕ ಯುವತಿಯರನ್ನು ಬಳಸಿಕೊಳ್ಳುತ್ತಿವೆಯೇ?
ಬಿಹಾರ ಪೋಲಿಸರು ಪಾಟ್ನಾ ಸರಣಿ ಬಾಂಬ್ ಸ್ಫೋಟದ ಸಂಶಯದ ಮೇಲೆ ಕೆಲವು ಮುಸ್ಲಿಂ ಸಮುದಾಯದ ಯುವಕರನ್ನು ಬಂಧಿಸಿದ ನಂತರ ಜಾರ್ಖಂಡದ ಧನಬಾದ್ ಜಿಲ್ಲೆಯಿಂದ ರಾಜು ಸಾವೊ ಎಂಬ ಹಿಂದೂ ಯುವಕನ್ನು ಬಂಧಿಸಿದರು. ನಂತರ ರಾಷ್ಟ್ರೀಯ ತನಿಕಾ ದಳ (ಎನ್‍ಐಎ) ಮತ್ತು ಬಿಹಾರ ಪೋಲೀಸರ ತಂಡವು ಇದೇ ಘಟನೆಗೆ ಸಂಭಂದಿಸಿದಂತೆ ಗೋಪಾಲ ಕುಮಾರ ಗೋಯಲ, ವಿಕಾಸ ಕುಮಾರ, ಪವನ ಕುಮಾರ ಮತ್ತು ಗಣೇಶ ಕುಮಾರ ಎಂಬ ಯುವಕರನ್ನು ಶಂಕಿತ ಉಗ್ರರಿಗೆ ಹಣಕಾಸು ಸಹಾಯ ಒದಗಿಸಿದ ಆರೋಪದ ಮೇಲೆ ಬಂಧಿಸಿ ನೂರಾರು ಬ್ಯಾಂಕ ಪಾಸಬುಕ್, ಎಟಿಎಮ್ ಕಾರ್ಡ ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಂಡಿತು. ಪೋಲೀಸ ಮೂಲಗಳ ಪ್ರಕಾರ ಈ ಯುವಕರು ಪಾಕಿಸ್ತಾನದ ಐಎಸ್‍ಐನೊಂದಿಗೆ ಸಂಭಂಧ ಹೊಂದಿದ್ದು, ಐಎಸ್‍ಐನಿಂದ ಹಣ ಪಡೆದು ಇಲ್ಲಿನ ಭಯೋತ್ಪಾದಕ ಚಟುವಟಿಕೆಗಳಿಗೆ ತಲುಪಿಸುತ್ತಿದ್ದರು ಎಂಬ ಗುಮಾನಿಯಿದೆ. ಹಿರಿಯ ಪೋಲೀಸ ಅಧಿಕಾರಿಯೊಬ್ಬರು 'ಇಂಡಿಯನ್ ಮುಜಾಹಿದ್ದೀನ ಹಿಂದೂ ಯುವಕರನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರಬಹುದು' ಎಂಬ ಗಂಭೀರ ವಿಷಯವನ್ನು ಹೊರಹಾಕಿದ್ದಾರೆ.
ಮುಂದುವರಿದಂತೆ ಕೆಲವು ದಿನಗಳ ಹಿಂದೆ ಪಾಟ್ನಾ ಸರಣಿ ಸ್ಫೋಟದ ಕೃತ್ಯಕ್ಕೆ ಹಣ ಪೋರೈಸಿದ ಖಚಿತ ಮಾಹಿತಿಯನ್ನಾಧರಿಸಿ ರಾಜ್ಯಕ್ಕೆ ಆಗಮಿಸಿದ ಬಿಹಾರ ಪೋಲೀಸರ ತಂಡ ಮಂಗಳೂರಿನ ಪಂಜಿಮೊಗೇರಿನ ನಿವಾಸಿ ಆಯೇಷಾ ಬಾನು, ಆಕೆಯ ಪತಿ ಜುಬೇರ್ ಹುಸೇನ್ ಮತ್ತು ಅವರ ಮೂವರು ಮಕ್ಕಳನ್ನು ವಶಕ್ಕೆ ತೆಗೆದುಕೊಂಡಿತು. ಆಯೇಷಾ ಮನೆಯಿಂದ ಹಲವಾರು ಪಾಸ್‍ಬುಕ್‍ಗಳು, ಎಟಿಎಮ್ ಕಾರ್ಡ್‍ಗಳು, ಮೊಬೈಲ್ ಫೊನ್‍ಗಳನ್ನು ಜಪ್ತುಮಾಡಲಾಯಿತು. ಕೊಡಗು ಜಿಲ್ಲೆ ವಿರಾಜಪೇಟೆಯ ದೇವಣಗೆರೆ ಗ್ರಾಮದ ಪುತ್ತೋಳಿ ಹದಿನಾರು ವರ್ಷಗಳ ಹಿಂದೆ ಕಾರು ಚಾಲಕನಾಗಿದ್ದ ಜುಬೇರ್ ಹುಸೇನ್ ಎಂಬ ಮುಸ್ಲಿಂ ಯುವಕನೊಂದಿಗೆ ಓಡಿಹೋಗಿ ಮದುವೆಯಾಗಿ ಆಯೇಷಾ ಬಾನುವಾಗಿ ಮತಾಂತರವಾಗಿದ್ದಳು. ಮಂಗಳೂರಿನಲ್ಲಿ ನಿವಾಸವಾಗಿದ್ದ ಆಯೇಷಾ-ಜುಬೇರ್ ದಂಪತಿ ಬೀಡಿ ಉದ್ಯಮದಲ್ಲಿ ತೊಡಗಿದ್ದರು.1992ರಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ಜುಬೇರ್ ಹುಸೇನ್ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ವಿಚಾರಣೆಯ ವೇಳೆ ಹೊರಬಂದಿದೆ. ಆಗಾಗ ತವರು ಮನೆಗೆ ಬರುತ್ತಿದ್ದ ಆಯೆಷಾ ತನ್ನ ಸಹೋದರ ದೇವಣಗೆರೆಯ ನಿವಾಸಿ ಎಚ್ ಬಿ ಮೋಟಪ್ಪ, ನೆರೆಯವರಾದ ಎಚ್ ಎಸ್ ಉದಯ ಮತ್ತು ರಘು ಇವರುಗಳ ಹೆಸರಿನಲ್ಲಿ ವಿರಾಜಪೇಟೆಯ ಸ್ಟೇಟ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರುಗಳಲ್ಲಿ 'ತನಗೆ ಸೌದಿಯಿಂದ ಹಣ ಬರುತ್ತದೆ' ಎಂದು ನಂಬಿಸಿ ಖಾತೆ ತೆರೆಸಿ ವ್ಯವಹರಿಸುತ್ತಿದ್ದಳು. ಇದಲ್ಲದೇ ಆಕೆ ವಿವಿಧ ಬ್ಯಾಂಕುಗಳಲ್ಲಿ ಒಟ್ಟೂ 56 ಬೇನಾಮಿ ಖಾತೆಗಳನ್ನು ತೆರೆದು ಕೋಟ್ಯಾಂತರ ಹವಾಲಾ ಹಣದ ವ್ಯವಹಾರ ನಡೆಸಿದ್ದಳು ಎಂಬ ಮಾಹಿತಿ ವಿಚಾರಣೆಯಿಂದ ತಿಳಿಯಬಂದಿದೆ. ಪುತ್ತೋಳಿ ಲವ್ ಜಿಹಾದಿಗೆ ಬಲಿಯಾಗಿ ಭಯೋತ್ಪಾದಕಳಾದಳೇ? ತನಿಖೆಯಿಂದ ವಿಷಯ ಇನ್ನೂ ಹೊರಬರಬೇಕಿದೆ.
ಈ ಘಟನೆಗಳು ಇಂಡಿಯನ್ ಮುಜಾಹಿದ್ದೀನದಂತಹ ಜಿಹಾದಿ ಭಯೋತ್ಪಾದಕ ಗುಂಪುಗಳ ಬೇರುಗಳನ್ನು ಹೊರಗೆಡಹುವುದರ ಜೊತೆಗೆ ಹಿಂದೂ ಯುವಕರೂ ಭಯೋತ್ಪಾದನೆಯ ಕಬಂಧ ಬಾಹುಗಳ ತೆಕ್ಕೆಗೆ ಬೀಳುತ್ತಿರುವ ಕಳವಳಕಾರಿ ಬೆಳವಣಿಗೆಯ ಬಗ್ಗೆ ಎಚ್ಚರಿಕೆಯನ್ನು ನೀಡುತ್ತವೆ. ಲವ್ ಜಿಹಾದಿಗೆ ಬಲಿಯಾಗಿ ಬ್ರೈನ್ ವಾಷ್‍ಗೊಳಗಾದ ಹೆಣ್ಣು ಮಕ್ಕಳು ಭಯೋತ್ಪಾದಕರಾಗಬಹುದಾದ ಹಾಗೆಯೇ ಹಣದಾಸೆಗೆ ಬಿದ್ದ ಹಿಂದೂ ಯುವಕರೂ ಧೂರ್ತ ಕೆಲಸಕ್ಕೆ ಕೈಹಾಕಬಹುದಾದ ಸಾಧ್ಯತೆಗಳನ್ನು ಮನಗಾಣಬೇಕು. ಸೌದಿ ದುಬೈ ಮುಂತಾದ ದೇಶಗಳಿಂದ ಭಾರತದ, ಅದರಲ್ಲೂ ಕರ್ನಾಟಕ ಮತ್ತು ಕೇರಳ ಕರಾವಳಿ ಜಿಲ್ಲೆಗಳ ಬೇನಾಮಿ ಖಾತೆಗಳಿಗೆ ಜಮೆಯಾಗುತ್ತಿರುವ ಹವಾಲಾ ಹಣ ಯಾವ ಯಾವ ಕೆಲಸಗಳಿಗೆ ಹರಿಯುತ್ತಿದೆ ಎನ್ನುವ ಮಾಹಿತಿ ತನಿಖೆಯಿಂದ ಹೊರಬರಬೇಕು. ಜೊತೆಗೆ ಕರಾವಳಿ ಜಿಲ್ಲೆಗಳಲ್ಲಿ ಒಂದೊಂದಾಗಿ ತಲೆಯೆತ್ತುತ್ತಿರುವ ಸುಪ್ತ ಉಗ್ರ ಸಂಘಟನೆಗಳು ಮತ್ತು ಅವುಗಳ ಕಾರ್ಯದ ನಿಜಸ್ವರೂಪದ ಬಗ್ಗೆ ಜನಜಾಗೃತಿ ಮೂಡಿಸಬೇಕಾಗಿದೆ.

No comments:
Post a Comment