Sunday, March 14, 2010

ಹುಸೇನರ ಚಿತ್ರಕ(ಕೊ)ಲೆ, ಅಭಿವ್ಯಕ್ತಿ ಸ್ವಾತಂತ್ರ್ಯ ಇತ್ಯಾದಿ

          ನವ್ಯ ಚಿತ್ರಕಲೆ, modern art ಬಗ್ಗೆ ಒಂದು ತಮಾಷೆಯ ಮಾತಿದೆ. ಒಂದು ನವ್ಯ ಚಿತ್ರ ತಯಾರಾಗುವ ಹಂತದಲ್ಲಿದ್ದಾಗ ಇಬ್ಬರು ಆ ಚಿತ್ರವನ್ನು ಅರ್ಥಮಾಡಿಕೊಳ್ಳಬಲ್ಲರು. ಒಬ್ಬ ಚಿತ್ರಬರೆಯುತ್ತಿರುವ ಕಲಾವಿದ. ಇನ್ನೊಬ್ಬ ಸರ್ವಶಕ್ತ, omnipotent ದೇವರು. ಆದರೆ ಆ ಚಿತ್ರ ಪೂರ್ಣಗೊಂಡಮೇಲೆ ಒಬ್ಬ ಮಾತ್ರ ಅದನ್ನು ಅರ್ಥಮಾಡಿಕೊಳ್ಳಬಲ್ಲ, ದೇವರು!! ಕೆಲವು ಚಿತ್ರಬ್ರಹ್ಮರ ಕೃತಿಗಳನ್ನು ನೋಡಿದರೆ ದೇವರ ಸಾಮರ್ಥ್ಯದ ಬಗ್ಗೆಯೂ ಸಂಶಯ ಹುಟ್ಟಿದರೆ ಆಶ್ಚರ್ಯ ಪಡಬೇಕಾದದ್ದೇನಿಲ್ಲ. ಇರಲಿ,
          ಚಿತ್ರ ಕಲಾವಿದ ಎಮ್. ಎಫ಼್. ಹುಸೇನ ಭಾರತೀಯ ನಾಗರಿಕತೆಯನ್ನು ತ್ಯಜಿಸಿ ಖತಾರ ನಾಗರಿಕತೆಯನ್ನು ಪಡೆದುಕೊಡಿರುವ ಸಂಗತಿ, ಆಗಾಗ ಬಿಸಿ ಬಿಸಿ ಚರ್ಚೆಯಲ್ಲಿರುವ ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯ-ವಿವಾದವನ್ನು ಮತ್ತೆ ಹಸಿಯಾಗಿಸಿದೆ. ಭಾರತೀಯ ಸಂವಿಧಾನದ article 19(1)(a)ನಲ್ಲಿ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯ(freedom of speech and expression)ವನ್ನು ಧೃಢಪಡಿಸಿದೆ ; ಬಹುತೇಕ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿರುವಂತೆ. ಹಾಗೆಯೇ article 19(2)ರ ಅನ್ವಯ ಅಭಿವ್ಯಕ್ತಿ ಸ್ವಾತಂತ್ರ್ಯವು ರಾಷ್ಟ್ರದ ಐಕ್ಯತೆ, ಸಾರ್ವಭೌಮತೆ, public order, decency and morality, contempt of court ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಸರಕಾರದ ನಿಬಂಧನೆಗಳಿಗೆ(reasonable restrictions) ಒಳಪಟ್ಟಿರುತ್ತದೆ (http://www.vakilno1.com/bareacts/Constitution/S19.htm). ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯ ಪರಿಪೂರ್ಣ(absolute) ಅಲ್ಲ, most liberal ಎನಿಸಿಕೊಳ್ಳುವ ಅಮೆರಿಕ ಹಾಗೂ ಯುರೋಪಿಯನ್ ರಾಷ್ಟ್ರಗಳಲ್ಲಿಯೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿಬಂಧನೆಗಳಿವೆ. ಹಾಗೆಯೇ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಭಾರತೀಯ ದಂಡ ಸಂಹಿತೆ IPC section 153A ಮತ್ತು 295A ಅನ್ವಯ ಶಿಕ್ಷಾರ್ಹ ಅಪರಾಧ. (http://www.vakilno1.com/bareacts/IndianPenalCode/S153A.htm, http://www.vakilno1.com/bareacts/IndianPenalCode/S295A.htm). ಇನ್ನು ದೇಶದ ಕಾನೂನನ್ನು ಆದರಿಸುವುದು ಹಾಗೂ ಪಾಲಿಸುವುದು ನಾಗರಿಕರ ಕರ್ತವ್ಯ ಎನ್ನುವುದನ್ನು ವಿಶೇಷವಾಗಿ ಹೇಳಬೇಕಾದ ಅಗತ್ಯವಿಲ್ಲ.
          ಕೆಲ ವರ್ಷಗಳಿಂದ ಚಿತ್ರ ಕಲಾವಿದ ಎಮ್. ಎಫ಼್. ಹುಸೇನ್ self imposed exileನಲ್ಲಿದ್ದಾರೆ. ಹುಸೇನರ self imposed exileನ ಕಾರಣವೇನು? ’ಕಲಾವಿದನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿರುವ ಹಿಂದೂಪರ ಸಂಘಟನೆಗಳ ವಿರೋಧ’ ಎಂಬುದೊಂದು ವಿವರಣೆ. ತನ್ನ ಒಬ್ಬ ನಾಗರಿಕನಿಗೆ ರಕ್ಷಣೆ ನೀಡುವಲ್ಲಿ ಭಾರತ ಸರ್ಕಾರದ ಸಾಮರ್ಥ್ಯದ ಬಗ್ಗೆ ಹುಸೇನರಿಗೆ ನಂಬಿಕೆಯಿಲ್ಲವೇ ? ಭಾರತದ ನ್ಯಾಯಾಲಯಗಳಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆಯಾಗುವ ಚಿತ್ರರಚೆನೆಗೆ ಸಂಭಂದಿಸಿದಂತೆ ಅನೇಕ ವ್ಯಾಜ್ಯಗಳು ದಾಖಲಾಗಿವೆ. ಅನೇಕ ಬಾರಿ ನ್ಯಾಯಾಲಯಗಳು ಸಮನ್ಸಗಳನ್ನು ಜಾರಿಮಾಡಿವೆ. ಎಲ್ಲಿಯವರೆಗೆ ಎಂದರೆ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವವರೆಗೂ. ಆದರೆ ಒಮ್ಮೆಯೂ ಹುಸೇನ್ ನ್ಯಾಯಾಲಯದ ಮುಂದೆ ಹಾಜರಾಗುವ ಸೌಜನ್ಯ ತೋರಲಿಲ್ಲ. ಭಾರತೀಯ ನ್ಯಾಯ ವ್ಯವಸ್ಥೆಯ ಮೇಲೆ ಕಲಾವಿದ ಹುಸೇನರಿಗೆ ನಂಬಿಕೆಯಿಲ್ಲವೇ ? is it not a case of contempt of court ? ಭಾರತದ ಒಂದು ವರ್ಗ ಹುಸೇನರನ್ನು ದ್ವೇಷಿಸುತ್ತದೆ. ಒಪ್ಪಿಕೊಳ್ಳೋಣ. ಆದರೂ ಬಹುಸಂಖ್ಯ ಮಾಧ್ಯಮ, ಮಾನವ ಹಕ್ಕು ಹೋರಾಟಗಾರರು, political obligationನಿಂದ ಬಂಧಿತರಾಗಿರುವ ರಾಜಕೀಯ ಪಕ್ಷಗಳು ಹುಸೇನರನ್ನು ಬೆಂಬಲಿಸುತ್ತಿವೆಯಲ್ಲ? ಇದೆಲ್ಲದರ ನಡುವೆ ಭಾರತೀಯ ಪೌರತ್ವವನ್ನು ತ್ಯಜಿಸಿದ್ದು ಭಾರತಕ್ಕೆ, ಅವರ ಬೆಂಬಲಿಗರಿಗೆ, ಅಭಿಮಾನಿಗಳಿಗೆ ಮಾಡಿದ ಅವಮಾನವಲ್ಲವೇ ? ಭಾರತದ ಜನರಿಂದ ಪಡೆದುಕೊಂಡ ಪ್ರಶಸ್ತಿ, ಸಮ್ಮಾನ, ಪ್ರೀತಿ, ಗೌರವ, ಆದರಗಳಿಗೆ ತೋರಿದ ಕೃತಘ್ನತೆಯಲ್ಲವೇ? self imposed exileನಲ್ಲಿರುವ ಮೂಲಕ, ಭಾರತದ ಪೌರತ್ವವನ್ನು ತ್ಯಜಿಸುವ ಮೂಲಕ ಭಾರತವನ್ನು ಪ್ರೀತಿಸುವ, ಭಾರತವನ್ನು ಆದರಿಸುವ (ಎಂದು ಹೇಳಿಕೊಳ್ಳುವ!) ಹುಸೇನ್, ಅಂತಾರಾಷ್ಟ್ರೀಯ ಸಮುದಾಯಕ್ಕೆ ಭಾರತದ ಯಾವ imageನ್ನು project ಮಾಡಬಯಸುತ್ತಾರೆ? ಇದೊಂದು ಅಗ್ಗದ (ಕು)ಖ್ಯಾತಿಯ ತಂತ್ರವೇ? ಅಂತಾರಾಷ್ಟ್ರಿಯ ಸಮುದಾಯದ sympathy ಗಳಿಸುವ ಜಾಣ್ಮೆಯೇ? ಅಷ್ಟಕ್ಕೂ ನಿಜವಾಗಿಯೂ ಪ್ರಜಾತಂತ್ರ ಭಾರತದಲ್ಲಿ ಕಲಾವಿದನ ಸ್ವಾತಂತ್ರ್ಯಕ್ಕೆ ಅಡ್ಡಿಯಿದೆಯೇ ? ಅದರಲ್ಲೂ ಕಲಾವಿದ ಮುಸ್ಲಿಮ್‍ನಾದರೆ ಉಸಿರುಗಟ್ಟಿಸುವ ವಾತಾವರಣ ಇದೆಯೇ? ಭಾರತದ ಕಲಾರಸಿಕ ಮತಧರ್ಮದ ಆಧಾರದ ಮೇಲೆ ಕಲಾವಿದರಲ್ಲಿ ತಾರತಮ್ಯ ಮಾಡುತ್ತಾನೆಯೇ? ಅಷ್ಟಕ್ಕೂ ಕಲಾವಿದನ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೇನು? ತನ್ನ ಮನಸ್ಸಿಗೆ ಬಂದದ್ದನ್ನು ಮನಸ್ಸಿಗೆ ಬಂದಂತೆ ಅಭಿವ್ಯಕಗೊಳಿಸುವುದೇ? ಕಲಾವಿದನ ಸಾಮಾಜಿಕ ಜವಾಬ್ದಾರಿಗಳೇನು? ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಏನನ್ನು ಬೇಕಾದರೂ ವ್ಯಕ್ತಪಡಿಸಬಹುದೇ.... ?...? ಇನ್ನೂ ಅನೇಕ ಪ್ರಶ್ನೆಗಳು. ಉತ್ತರಕ್ಕಾಗಿ ಕಾಯುತ್ತಿವೆ.
          ಇರಲಿ ಈ ಪ್ರಶ್ನೆಗಳು, ಉತ್ತರಕ್ಕಾಗಿ ಕಾಯುತ್ತ.
          ಕಲಾಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ದಿನಗಟ್ಟಲೆ ವಾದ ಮಾಡುವಾಗ, ಪುಟಗಟ್ಟಲೆ ಗೀಚುವಾಗ "ಕಲೆಗಾಗಿ ಕಲೆ", art is a separate religion ಇತ್ಯಾದಿ ಇತ್ಯಾದಿ ಆಣಿಮುತ್ತುಗಳನ್ನು ಉದುರಿಸಲಾಗುತ್ತದೆ. ಕಲೆಯ ಉದ್ಧೇಶ ಏನು? ಕಲಾರಸಿಕನಲ್ಲಿ ರಸೋದ್ದೀಪನ, ಹೃದಯಸಂಸ್ಕಾರವೇ? ಅಗ್ಗದ ಮನೋರಂಜನೆಯೇ? ಅಥವಾ ಕಲೆ ಸಾಮಾಜಿಕ ಬದಲಾವಣೆಯ ಮಾಧ್ಯಮವೇ (instrument of social change) ? ಏನೇ ಇರಲಿ. ಆದರೆ ಕಲಾವಿದ ಒಂದು ಕಲಾಕೃತಿಯನ್ನು ರಚಿಸಿದನಾದರೆ ಅದರ ಹಿಂದೆ ಒಂದು ಉದ್ದೇಶ ಇರುತ್ತದೆ. ಅವನ ಕಲಾಕೃತಿಯಲ್ಲಿ ಒಂದು ಸಂದೇಶ ಇರುತ್ತದೆ, ಸೌಂದರ್ಯಾತ್ಮಕ ಅಂಶಗಳಿರುತ್ತವೆ. ತನ್ನ ಕಲಾಕೃತಿಯ ಮೂಲಕ ಕಲಾವಿದ ಏನನ್ನೋ ಹೇಳಹೊರಟಿರುತ್ತಾನೆ.
          ಈಗ ಎಮ್. ಎಫ಼್. ಹುಸೇನರ ಚಿತ್ರಗಳಿಗೆ ಬರೋಣ. ತಮ್ಮ ವಿವಾದಾತ್ಮಕ ಚಿತ್ರಗಳಲ್ಲಿ ಹುಸೇನ್ ಹೇಳಹೊರಟಿರುವುದೇನು? ಚಿತ್ರಗಳ ಸೌಂದರ್ಯಾತ್ಮಕ ಅಂಶಗಳೇನು (aesthetic aspects)? ಅವರ ಚಿತ್ರಗಳು ಒಬ್ಬ ಕಲಾರಸಿಕನಿಗೆ ನೀಡುವ ಸಂದೇಶವೇನು? ಉದಾಹರಣೆಗೆ ಅವರ ಒಂದು ಚಿತ್ರ "rape of India". ಮುಂಬೈ ಬಾಂಬ್ ಸ್ಫೋಟ ವಿಷಯ ಎನ್ನಲಾಗುತ್ತದೆ. ದೇಶದ ಒಂದು ನಗರದ ಒಂದು ಭಾಗದಲ್ಲಿ ನಡೆದ ಜೀವನವಿರೋಧಿ ಮತಾಂಧ ಜಿಹಾದಿಗಳ ಕೃತ್ಯ ಒಬ್ಬ ಪ್ರಬುದ್ಧ(?) ಸುಸಂಸ್ಕೃತ(?) ಕಲಾವಿದನ ದೃಷ್ಟಿಗೆ "ಭಾರತದ ಅತ್ಯಾಚಾರ"ವಾಗಿ ಯಾಕೆ ಕಾಣಬೇಕು? (ಅಷ್ಟಕ್ಕೂ ಹುಸೇನರು ಅತ್ಯಾಚಾರವಾದ(ಅವರ ಪ್ರಕಾರ) ಭಾರತದ ಪರವೋ ಇಲ್ಲ ಅತ್ಯಾಚಾರಿಗಳ ಪರವೋ)? ಸಾವನ್ನೂ "ಸಾವು" ಎನ್ನದೇ ದಿವಂಗತ, ವೈಕುಂಠವಾಸಿ, ಲಿಂಗೈಕ್ಯ ನಿರ್ವಾಣ, ಮುಕ್ತ ಇತ್ಯಾದಿ ಶಬ್ದಗಳಿಂದ ವಿವರಿಸುವ ಭಾರತೀಯ ರೀತಿಗಳನ್ನು ಇದರ ಪಕ್ಕ ಇಟ್ಟು ನೋಡಿ.
          ಹುಸೇನರ ಚಿತ್ರವನ್ನು ವಿರೋಧಿಸುವವರ ನಿಲುವು ಸ್ಪಷ್ಟವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಬೇಕಾಬಿಟ್ಟಿ ಒಂದು ಜನಾಂಗದ ಸಾಂಸ್ಕೃತಿಕ ನಂಬಿಕೆಗಳಿಗೆ ನೋವುಂಟುಮಾಡುವುದನ್ನು ವಿರೋಧಿಸುವ ಹಕ್ಕು, ಕಲಾವಿದನ ಅಭಿವ್ಯಕ್ತಿ ಸ್ವಾತಂತ್ರ್ಯದಷ್ಟೇ ಮಹತ್ವದ್ದು. ಸಹನೆಗೂ ಮಿತಿಯಿರುತ್ತದೆಯಲ್ಲವೇ?
          ಹುಸೇನರ ಪರವಾಗಿ ನಿಲ್ಲುವ ಬುದ್ದಿಜೀವಿಗಳಾಗಲೀ (ಬುದ್ದಿಜೀವಿಗಳೋ, ದುರ್ಬುದ್ದಿಜೀವಿಗಳೋ, ಲದ್ದಿಜೀವಿಗಳೋ? ಒಟ್ಟಿನಲ್ಲಿ ಒಂದು ಒಳ್ಳೆಯ ಶಬ್ದದ ಅರ್ಥವಂತೂ ಕುಲಗೆಟ್ಟಿ ಹೋಗಿದೆ) ಅಥವಾ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಿಕಾರರಾಗಲೀ, ಹುಸೇನರ ಭಾರತ ಪೌರತ್ವ ತ್ಯಾಗದ ಹೊಣೆಯನ್ನು ವಿರೋಧಿಗಳ ಹಣೆಗೆ ಕಟ್ಟುವ ಮುಂಚೆ (ಅಷ್ಟಕ್ಕೂ ಹುಸೇನ್ ಸ್ವಯಂ ಭಾರತವನ್ನು ಬಿಟ್ಟರೇ ಹೊರತು ಭಾರತೀಯರೇನು ಹೊರದಬ್ಬಲಿಲ್ಲವಲ್ಲ), ವಿವಾದಾತ್ಮಕ ಚಿತ್ರಗಳ ಅರ್ಥವನ್ನು ಸಾಮಾನ್ಯ ಜನತೆಗೆ ವಿವರಿಸುವ ಯತ್ನವನ್ನೇಕೆ ಮಾಡಬಾರದು? ಹುಸೇನರ ಚಿತ್ರದ ಸಂದೇಶವನ್ನು, aesthetic aspectsನ್ನು ವಿಮರ್ಶಿಸುವ ಪ್ರಯತ್ನವನ್ನೇಕೆ ಮಾಡಬಾರದು? ನಮ್ಮಲ್ಲಿ ಮಾಧ್ಯಮಗಳಿಗೇನೂ ಕೊರತೆಯಿಲ್ಲವಲ್ಲ. ಸ್ವಲ್ಪ ಮಾಧ್ಯಮಗಳ "ಸದುಪಯೋಗ"ವೂ ಆಗಲಿ.

ಕೆಲವು ಚಿತ್ರಗಳಿರುವ ಕೊಂಡಿ ಇಲ್ಲಿದೆ : http://www.hindujagruti.org/activities/campaigns/national/mfhussain-campaign/

No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...